ಭಾನುವಾರ, ಸೆಪ್ಟೆಂಬರ್ 12, 2010

ಪೆದ್ದುಗುಂಡನ ರಗಳೆ - ೨೮

ಎನ್ನ ತೋಳ ತೊಟ್ಟಿಲಿನಲಿ ಕಂದ

ಹೂದುಟಿಯಲಿ ಅಡಗಿದ ಕೋಟಿ ನಗು
ನಕ್ಕು ನಲಿದು ದಣಿದು ನಿದ್ರಿಸುತಿರೆ
ಮನ ಮಮತೆಯ ಕಡಲು - ಪೆದ್ದುಗುಂಡ

ಬುಧವಾರ, ಜನವರಿ 20, 2010

ಪೆದ್ದುಗುಂಡನ ರಗಳೆ - ೨೭

ಬಡಪಾಯಿ ಆಟವು ಎಸಗಿದ ತಪ್ಪೇನು ?
ತಪ್ಪು ಅದ ಜೂಜಾಗಿಸಿದ ಪುಂಡರದು.
ಜಗಳ, ಓಟಗಳೋ, ಕ್ರಿಕೆಟ್ಟಿನಾಟಗಳೋ,
ಗೆಲು-ಸೋಲ್ಗಳ ದ್ವೈತವೇ ದ್ಯೂತ - ಪೆದ್ದುಗುಂಡ 

ಪೆದ್ದುಗುಂಡನ ರಗಳೆ - ೨೬

ಉಡುವಾಸೆ ತೊಡುವಾಸೆ ಮುಡಿವಾಸೆ
ಮೂಸುವಾಸೆ   ಉಣುವಾಸೆ ಕುಡಿವಾಸೆ
ಕೇಳುವಾಸೆ   ಕಾಣುವಾಸೆ ಮುದ್ದಿಸುವಾಸೆ 
ಆಸೆ ಅತಳ ಭಾಂಡ - ಪೆದ್ದುಗುಂಡ