ಜಗದ ಸತ್ಯ ಜ್ಞಾನ, ಕಾಡ ಮೂಲೆಯ ಪೂ
ಋಷಿಪುಂಗವರು ಅದ ಹೀರುವ ದುಂಬಿ.
ಸಾಸಿರ ಪೂರಸದೀಪಾಕ ಸನಾತನ;
ಈ ಧಮ್ಮ ಸವಿದುಪ್ಪ - ಪೆದ್ದುಗುಂಡ.
ಸೋಮವಾರ, ನವೆಂಬರ್ 24, 2008
ಪೆದ್ದುಗುಂಡನ ರಗಳೆ - ೪
ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ
ಪೆದ್ದುಗುಂಡನ ರಗಳೆ - ೩
ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ
ಪೆದ್ದುಗುಂಡನ ರಗಳೆ - ೨
ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು,
ತಾಮಸದ ಕರಿ ನೆರಳ ಸರಿಯಿತು ಸಂಚು.
ಕತ್ತಲೆಯ ಸುಖಭೂತ ನರಳಿ ಬಸವಳಿಯೆ,
ದೀಪ ಜ್ಯೋತಿ ಅರಳಿತು - ಪೆದ್ದುಗುಂಡ
ತಾಮಸದ ಕರಿ ನೆರಳ ಸರಿಯಿತು ಸಂಚು.
ಕತ್ತಲೆಯ ಸುಖಭೂತ ನರಳಿ ಬಸವಳಿಯೆ,
ದೀಪ ಜ್ಯೋತಿ ಅರಳಿತು - ಪೆದ್ದುಗುಂಡ
ಪೆದ್ದುಗುಂಡನ ರಗಳೆ - ೧
ಸುಖ ಸುಪ್ಪತ್ತಿನೊಳಾಡುವರಂ ಕಂಡು
ಕರುಬುವ ಮಂದಿ ಕಷ್ಟಕೋಟಲೆ
ರಹಿತ ಸಗ್ಗ ಘೋರವೆಂದುಲಿವರು
ಪಾಪವದಲ್ಲ ಪುಣ್ಯವೋ - ಪೆದ್ದುಗುಂಡ
ಕರುಬುವ ಮಂದಿ ಕಷ್ಟಕೋಟಲೆ
ರಹಿತ ಸಗ್ಗ ಘೋರವೆಂದುಲಿವರು
ಪಾಪವದಲ್ಲ ಪುಣ್ಯವೋ - ಪೆದ್ದುಗುಂಡ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)